Home 🎬 Bollywood 🎵 Pakistani 🎤 English Pop

Thera Yeri Ambaradaage

👤 S. P. Balasubrahmanyam 🎼 Bangaarada Hoovugalu: Kannada Film Hits Of S. P. Balasubrahmanyam Vol. 2 ⏱️ 3:09
🎵 2230 characters
⏱️ 3:09 duration
🆔 ID: 3154490

📜 Lyrics

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ
ಮರಗಿಡ ಕೂಗ್ಯಾವೇ
ಹಕ್ಕಿ ಹಾಡ್ಯಾವೇ
ಬೀರ್ಯಾವೇ, ಚೆಲುವ ಬೀರ್ಯಾವೇ
ಬಾ, ನೋಡಿ ನಲಿಯೋಣ ತಮ್ಮ
ನಾವ್, ಹಾಡಿ ಕುಣಿಯೋಣ ತಮ್ಮ

ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂ ಅರಳ್ಯಾವೆ
ಆ ಹೂವಿನ ತುಂಬಾ ಸಣ್ಣ ಚಿಟ್ಟೆ ಕುಂತಾವೆ
ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ

ಕುಂತರೆ ಸೆಳೆವ
ಸಂತಸ ತರುವ
ಕುಂತರೆ ಸೆಳೆವ
ಸಂತಸ ತರುವ
ಹೊಂಗೆ ತೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೇ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ
ಮರಗಿಡ ಕೂಗ್ಯಾವೇ
ಹಕ್ಕಿ ಹಾಡ್ಯಾವೇ
ಮರಗಿಡ ಕೂಗ್ಯಾವೇ
ಚಿಲಿಪಿಲಿ ಹಕ್ಕಿ ಹಾಡ್ಯಾವೇ

ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆಗೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನವ ಗಾನ ಎಲ್ಲರ ಮನಸಾ ಸೆಳೆದಾವೆ
ಭಾವಾ ಬಿರಿದು
ಹತ್ತಿರ ಕರೆದು
ಭಾವಾ ಬಿರಿದು
ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ

ತೇರಾ ಏರಿ ಅಂಬರದಾಗೆ ನೇಸರು ನಗುತಾಲೆ
ತೇರಾ ಏರಿ ಅಂಬರದಾಗೆ ನೇಸರು ನಗುತಾಲೆ
ಮರಗಿಡ ಕೂಗ್ಯಾವೇ
ಹಕ್ಕಿ ಹಾಡ್ಯಾವೇ
ಬೀರ್ಯಾವೇ, ಚೆಲುವ ಬೀರ್ಯಾವೇ
ಬಾ, ನೋಡಿ ನಲಿಯೋಣ ತಮ್ಮ
ನಾವ್, ಹಾಡಿ ಕುಣಿಯೋಣ ತಮ್ಮ

⭐ Rate These Lyrics

Average: 0.0/5 • 0 ratings