Home 🎬 Bollywood 🎵 Pakistani 🎤 English Pop

Bangarada Bombe Nanna

👤 K. J. Yesudas 🎼 Sipayi (Original Motion Picture Soundtrack) ⏱️ 4:46
🎵 2588 characters
⏱️ 4:46 duration
🆔 ID: 6563648

📜 Lyrics

ಜಾರಿ ಬಿದ್ದೆನಮ್ಮ ಸಿಕ್ಕಿ ಬಿದ್ದೆನಮ್ಮ ||||
ಪ್ರೀತಿ ಮಾಡಿದರೆ ಬೇಡ ಅನ್ನಲಾರೆ
ಇವನ ರೀತಿ ನಾ ಪ್ರೀತಿ ಮಾಡಲಾರೆ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿಮದ್ದು ಹಳ್ಳಿ ಹಾಡಮ್ಮ ||||
ತಂದಾನನ ತಾನನ ನಾನನ
ಕೇಳೇ ಚಿನ್ನ ಸುವ್ವಾಲಿ ರಾಗಾನ
ತಂದಾನನ ತಾನನ ನಾನನ
ಕೇಳೇ ನನ್ನ ರಂಗೋಲಿ ರಾಗಾನ
ಎಲ್ಲಿದೆ ಹೇಳು ನಿನ್ನ ಗಾಯ
ತಂದಾನ ಕೇಳಿ ಮಂಗಮಾಯ

ಅಹಹಾ ಅಹಹಾ

ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ

ಪ್ರೀತೀಲಿ ಸಿಪಾಯಿ ಆಗೋದ ಗವಾಯಿ
ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿಮದ್ದು ಹಳ್ಳಿ ಹಾಡಮ್ಮ ||||
ಆಸೆಯಾಯಿತಮ್ಮ ಮಾತು ಹೋಯಿತಮ್ಮ
ಪ್ರೀತಿ ಬಂದಿತಮ್ಮ ಧೈರ್ಯ ಹೋಯಿತಮ್ಮ
ಇಂಥ ಹುಡುಗನ ಎಲ್ಲೂ ನೋಡೆಯಿಲ್ಲ
ಇವನ ಮುದ್ದಿಸೊ ಧೈರ್ಯ ನನಗೆ ಇಲ್ಲ
ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ
ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮ
ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ
ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮ
ತಂದಾನನ ತಾನನ ನಾನನ
ಬಂದೂಕದ ಬಾಯಲ್ಲಿ ಸುವ್ವಾಲಿ
ತಂದಾನನ ತಾನನ ನಾನನ
ಸಿಪಾಯಿಯ ಮಾತೆಲ್ಲ ಕವ್ವಾಲಿ
ವೈರಿಯ ಇರುವೆಯಂತ ತಿಳಿ
ಸಿಂಹದ ಗುಹೆಯಲ್ಲಿ ಇಳಿ
ವರೆವಾ ವರೆವಾ
ಕಿತ್ತೂರ ಚನ್ನಮ್ಮ ನೀನಾಗುತೀಯಮ್ಮ
ಒನಕೆ ಓಬವ್ವ ನೀನಾಗುತೀಯಮ್ಮ
ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿಮದ್ದು ಹಳ್ಳಿ ಹಾಡಮ್ಮ
ಹೇ. ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿಮದ್ದು ಹಳ್ಳಿ ಹಾಡಮ್ಮ

⭐ Rate These Lyrics

Average: 0.0/5 • 0 ratings